ಕುರುಬರಶ್ರೇಣಿ ಸರ್ಕಾರಿ.ಮಾದರಿಹಿರಿಯ.ಪ್ರಾ.ಶಾಲೆ.

ಕುರುಬರಶ್ರೇಣಿ ಸರ್ಕಾರಿ.ಮಾದರಿಹಿರಿಯ.ಪ್ರಾ.ಶಾಲೆ.

ಸೋಮವಾರ, ಅಕ್ಟೋಬರ್ 5, 2009

ನೋಟ್ ಬುಕ್ ವಿತರಣಾ ಸಮಾರಂಭ: ದೇವರಾಜು. ಸಿ.ಡಿ.

ನೋಟ್ ಪುಸ್ತಕ ವಿತರಣಾ ಸಮಾರಂಭ: ಶ್ರೀ ಸಿ.ಡಿ.ದೇವರಾಜು. ರೋಟರಿ. ಜೆ.ಪಿ.ನಗರ
ಶ್ರೀ ಯುತ ದೇವರಾಜು ಸಿ.ಡಿ. ಕುರುಬರಶ್ರೇಣಿ ಯ ಹಿರಿಯ ವಿದ್ಯಾರ್ಥಿ. ಇವರು ಪ್ರತಿ ವರ್ಷವೂ ಮಕ್ಕಳಿಗೆ ನೋಟ್ ಪುಸ್ತಕ ವಿತರಣೆ ಮಾಡುತ್ತಿದ್ದು ಈ ಹಿಂದೆ ಮಕ್ಕಳಿಗೆ ದಿನಾಂಕ : 18/11/2008 ರಂದು ಮಕ್ಕಳಿಗೆ ನೋಟ್ ಪುಸ್ತಕ ವಿತರಣೆ ಮಾಡಿದ್ದರು.
ಈ ವರ್ಷವೂ ಸಹ ಸುಮಾರು 600 ನೋಟ್ ಪುಸ್ತಕಗಳನ್ನು ಮಕ್ಕಳಿಗೆ ವಿತರಿಸಿದರು
ಕಾರ್ಯಕ್ರಮವನ್ನು ಕುರುಬರಶ್ರೇಣಿ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿತ್ತು.
ಶ್ರೀ ದೇವರಾಜು .ಸಿ.ಡಿ. ಇವರು ತಮ್ಮರೋಟರಿ ಸಂಸ್ಥೆ ಜೆ.ಪಿ.ನಗರ .ಬೆಂಗಳೂರು ವತಿಯಿಂದ ರೋಟರಿ ಅಧ್ಯಕ್ಷರಾದ ಶ್ರೀ ಉಮೇಶ್ ಚಿಕ್ ಮಠ ರವರನ್ನು , ಕಾರ್ಯದರ್ಶಿಗಳಾದ ಸುರೇಶ್ ಬಾಬು , ಬೀರಪ್ಪ. ರೋಟೇರಿಯನ್ ರವರನ್ನು ಕರೆತಂದಿದ್ದರು. ಕಾರ್ಯ ಕ್ರಮ ಅದ್ಬುತವಾಗಿತ್ತು . ಚಿಕ್ಕನಾಯಕನಹಳ್ಳಿ ರೋಟೇರಿಯನ್ ಅಧ್ಯಕ್ಷರಾದ ಕೆ.ವಿ.ಕುಮಾರ್ ರವರು, ಕಾರ್ಯದರ್ಶಿಗಳಾದ ಎಂ.ಎನ್.ಗಂಗಾಧರ್ ರವರು . ರೋಟೇರಿಯನ್ ಆದ ಭುವನ ಸುಂದರ್ , ರಾಘವೇಂದ್ರ , ಸಿ.ಬಿ.ಪರಮೇಶ್ ರವರು, ಎಸ್ .ಡಿ ಎಂ ಸಿ. ಯವರಾದ ಶ್ರೀ ಚಂದ್ರಶೇಖರ್ ರಾವತ್ , ನಾರಾಯಣ್ ರವರು ಹಾಜರಿದ್ದರು .
ಶಾಲೆಯ ಪ್ರಭಾರಿ ಮುಖ್ಯ ಶಿಕ್ಷಕಿಯಾದ ಶ್ರೀಮತಿ ಸಾಕಮ್ಮ ನವರು ಅಧ್ಯಕ್ಷತೆ ವಹಿಸಿದ್ದರು.
ಶಿಕ್ಷಕರಾದ .ಶಿವಕುಮಾರ್. ಕೆ . ಎಲ್ಲರನ್ನೂ ಸ್ವಾಗತಿಸಿದರು.
ಶ್ರೀಮತಿ ಶಾಂತಮ್ಮ ನಿರೂಪಣೆ ನಡೆಸಿಕೊಟ್ಟರು.
ಶ್ರೀಯುತ ಉಮೇಶ್ ಚಿಕ್ಕಮಠ ರವರು ತಾವು ಓದಿದ ಹಿಂದಿನ ನೆನಪುಗಳನ್ನು ಮಕ್ಕಳ ಮುಂದೆ ಹೇಳಿದರು .ಎಂತಹ ಬಡ ವಿದ್ಯಾರ್ಥಿಯಾದರೂ ಆರ್ಥಿಕವಾಗಿ ಬಡವನೇ ಹೊರತು ಬೌದ್ಧಿಕವಾಗಿ ಅಲ್ಲ . ನಾವು ಇಂದು ಈ ಕಾರ್ಯಕ್ರಮ ಏರ್ಪಡಿಸಿರುವುದು ಮುಂದೆ ನೀವು ಈ ತರಹ ದಾನ ಧರ್ಮಗಳನ್ನು ಮಾಡುವುದನ್ನು ಮೈಗೂಡಿಸಿಗೊಳ್ಳಲಿ ಎಂಬುದಾಗಿ ತಿಳಿಸಿದರು.
ಶ್ರೀ ಬೀರಪ್ಪ ರೋಟೇರಿಯನ್ ರವರು ಗಾಳಿ ಪಟ ದ ಕೇಂದ್ರ ಶಕ್ತಿಯನ್ನು ಉದಾಹರಣೆಯಾಗಿ ನೀಡಿ ಮಕ್ಕಳು ತಮ್ಮ ಉದ್ದೇಶ ಸಾಧನೆಯ ಕಡೆಗೆ ಮಾತ್ರ ಮಹತ್ವ ಕೊಡಬೇಕೆಂದು ತಿಳಿ ಹೇಳಿದರು.
ಕಾರ್ಯಕ್ರಮದ ಕೇಂದ್ರ ಬಿಂದು ದೇವರಾಜು ಸಿ.ಡಿ. ಮಾತನಾಡಿ ತಮ್ಮ ಭಾವನೆಗಳನ್ನು ಹಾಗೂ ಶಾಲೆಯ ಬಗೆಗೆ ತಮಗೆ ಇರುವ ಮಹತ್ಕಾಳಜಿಯನ್ನು ಮಕ್ಕಳಿಗೆ ಹೇಳಿದರು. ಪ್ರತಿ ಮಕ್ಕಳಿಗೂ ನೋಟ್ ಪುಸ್ತಕ ವಿತರಣಾ ಕಾರ್ಯಕ್ರಮ ನಡೆಯಿತು.
ನಂತರ ಶ್ರೀಮತಿ ದ್ರಾಕ್ಷಾಯಿಣಮ್ಮ ಎಲ್ಲರಿಗೂ ವಂದಿಸಿದರು.
ನಮ್ಮ ಶಾಲೆಯನ್ನು ಗುರುತಿಸಿ ಬಡ ಮಕ್ಕಳಿಗೆ ಈ ತರಹದ ಕಾಣಿಕೆ ನೀಡಿ ಮಕ್ಕಳಲ್ಲಿ ಜವಾಬ್ದಾರಿ ಬೆಳಸುವಂತಹ ಕಾರ್ಯಕ್ರಮ ಹಮ್ಮಿಕೊಂಡಂತಹ ಶ್ರೀ ಸಿ.ಡಿ. ದೇವರಾಜು ರವರಿಗೆ ಕುರುಬರಶ್ರೇಣಿ ಶಾಲೆ ಸದಾ ಕೃತಜ್ಞತೆಯನ್ನು ಸಲ್ಲಿಸುತ್ತದೆ.
ಹಿರಿಯ ವಿದ್ಯಾರ್ಥಿಗಳೇ ನೀವು ಈ ರೀತಿ ಮಕ್ಕಳಿಗೆ ನೇರವಾಗಿ ಸಹಾಯ ಮಾಡಬೇಕೆಂದಿದ್ದರೆ ಶಾಲೆಯ ಶಿಕ್ಷಕರನ್ನು ಸಂಪರ್ಕಿಸಿ . ನಿಮ್ಮ ಕೈಲಾದಷ್ಟು ನಿಮ್ಮ ಶಾಲೆಯನ್ನು ಪ್ರಗತಿಯ ಶಿಖರಕ್ಕೆ ಕೊಂಡೊಯ್ಯಿರಿ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ